
ವಿಶ್ವ ತುಳು ಸಮ್ಮೇಳನೋ ಉಜಿರೆ, ತುಳು ಜನಪದ ಗೊಬ್ಬುಲೇಸ್ ಸಂಚಾಲನಾ ಸಮಿತಿ ಬೆಳ್ಳಾರೆ, ಪಂಜ ವಲಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ- ಮಡಿಕೇರಿ ಇವುಗಳ ಸಹಕಾರದಲ್ಲಿ ಬೆಳ್ಳಾರೆ - ಪಂಜ ವಲಯ ಮಟ್ಟದ ಜನಪದ ಗೊಬ್ಬುಲೆನ ಉದಿಪನ ಲೇಸ್ ಬೆಳ್ಳಾರೆ ಸ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.
ಜಾನಪದ ಕಲಾವಿದ ಬಾಬು ಅಜಿಲ ಅವರು ತೆಂಗಿನ ಹೂ ಅರಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಚಾಲನಾ ಸಮಿತಿ ಅಧ್ಯಕ್ಷ, ಜಿ.ಪಂ.ಸದಸ್ಯ ಚಂದ್ರಶೇಖರ ಕಾಮತ್ ವಹಿಸಿ, ನಮ್ಮ ಸಂಸ್ಕೃತಿಗೆ ಪುನರುಜ್ಜೀವನದ ಕೆಲಸ ಇನ್ನೂ ಹೆಚ್ಚು ಹೆಚ್ಚಾಗಿ ನಡೆಯಲಿ ಎಂದರು. ಮುಖ್ಯ ಅತಿಥಿಯಾಗಿ ಬೆಳ್ಳಾರೆ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಗೋಪಾಲಕೃಷ್ಣ ಶ್ಯಾನುಭಾಗ್, ಪ್ರಗತಿಪರ ಕೃಷಿಕ ಶ್ರೇಯಾಂಕ್ ಕುಮಾರ್, ತಾ.ಪಂ.ಅಧ್ಯಕ್ಷೆ ಪುಷ್ಪಾವತಿ ಬಾಳಿಲ, ಗ್ರಾ.ಪಂ. ಅಧ್ಯಕ್ಷ ವಿಠಲದಾಸ ಎನ್.ಎಸ್.ಡಿ., ಜಿ.ಪಂ. ಸದಸ್ಯೆ ಭಾಗೀರಥಿ, ದೊಡ್ಡಣ್ಣ ಬರಮೇಲು ಭಾಗವಹಿಸಿದರು.
ವೇದಿಕೆಯಲ್ಲಿ ಯೋಜನಾಧಿಕಾರಿ ಆನಂದ ಸುವರ್ಣ, ಸಂಚಾಲನಾ ಸಮಿತಿ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಒಕ್ಕೂಟದ ಅಧ್ಯಕ್ಷ ಬೂಡು ರಾಧಾಕೃಷ್ಣ ರೈ, ಬೆಳ್ಳಾರೆ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಮಾಧವ ಗೌಡ, ಶ್ರೀರಾಮ ಪಾಟಾಜೆ ಉಪಸ್ಥಿತರಿದ್ದರು. ಯೋಜನೆಯ ನಾಗರಾಜ ಕೆ.ಪಿ. ಸ್ವಾಗತಿಸಿ, ವಲಯ ಮೇಲ್ವಿಚಾರಕಿ ಲಕ್ಷ್ಮೀ ವಂದಿಸಿದರು.
ಮೇಲ್ವಿಚಾರಕ ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕೊತ್ತಂಗಳಿ ಕ್ರಿಕೆಟ್, ಕುಟ್ಟಿದೊಣ್ಣೆ, ಲಗೋರಿ, ಬಚ್ಚ, ಚೆನ್ನೆಮಣೆ, ಟೊಂಕ, ಜುಬಲಿ, ಕಲ್ಲಾಟ ಮೊದಲಾದ ಕ್ರೀಡೆಗಳು ನಡೆದವು.